‘ಕೈ’ ನಾಯಕರ ಕಾಲೆಳೆದ ‘ಕಮಲ’ ಪಾಳೆಯ! ಡಿಕೆಶಿ, ಸಿದ್ದು ವಿರುದ್ಧ ಬಿಜೆಪಿ ಸರಣಿ ಟ್ವೀಟ್

ಕೆಪಿಸಿಸಿ ಅಧ್ಯಕ್ಷ (KPCC President) ಡಿಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟೀಕಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ…
ಬೆಂಗಳೂರು: ಕಾಂಗ್ರೆಸ್ ನಾಯಕರ (Congress Leaders) ವಿರುದ್ಧ ರಾಜ್ಯ ಬಿಜೆಪಿ (State BJP) ಟ್ವೀಟ್ ವಾರ್ (Tweet War) ಮುಂದುವರೆದಿದೆ. ಕೆಪಿಸಿಸಿ ಅಧ್ಯಕ್ಷ (KPCC President) ಡಿಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟೀಕಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. “ಡಿಕೆಶಿ ಅವ್ರೇ ನಿಮಗೆ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ, ಈಗಲಾದರೂ ಕಾಣದ ಕೈಗಳು ನಿಮ್ಮ ಅಧಿಕಾರ ಕಿತ್ತುಕೊಳ್ಳುತ್ತಿವೆ ಅಂತ ಅರಿಯಿರಿ” ಅಂತ ಕಾಲೆಳೆದಿದೆ. ಇನ್ನು “ರಾಜಕೀಯ ನಿವೃತ್ತಿ ಆಗುತ್ತೀನಿ ಅಂತ ದಶಕ ಆಯ್ತು, ಇನ್ನೂ ಅದು ಸಾಧ್ಯವಾಗಿಲ್ಲ” ಅಂತ ಸಿದ್ದರಾಮಯ್ಯ ಅವರನ್ನು ಟೀಕಿಸಿದೆ.
ಡಿಕೆಶಿ ವಿರುದ್ಧ ಬಿಜೆಪಿ ಟ್ವಿಟ್ ವಾರ್
ರಾಜ್ಯ ಬಿಜೆಪಿಯು ಸರಣಿ ಟ್ವಿಟ್ ಮೂಲಕ ಡಿಕೆಶಿಗೆ ಟಾಂಗ್ ಕೊಟ್ಟಿದೆ. “ಡಿಕೆ ಶಿವಕುಮಾರ್ ಅವ್ರೇ, ಅವರ ಕೈಗೆ ಬಂದ ತುತ್ತು, ನಿಮ್ಮ ಬಾಯಿಗೆ ಬರುವುದಿಲ್ಲ. ಈ ಸತ್ಯವನ್ನು ಈಗಲಾದರೂ ಅರಿತುಕೊಳ್ಳಿ. ಕಾಣದ ಕೈಗಳು ನಿಮ್ಮ ಅಧಿಕಾರವನ್ನು ನಿಮ್ಮ ಮುಂದೆಯೇ ಹೀಗೆಯೇ ಕಿತ್ತುಕೊಳ್ಳುತ್ತಾರೆ” ಅಂತ ಟೀಕಿಸಿದೆ.
ಡಿಕೆಶಿ ಹುಟ್ಟುಹಬ್ಬದ ಬಗ್ಗೆಯೂ ಟೀಕೆ
ಮುಂದುವರೆದು ಟ್ವೀಟ್ ಮಾಡಿರುವ ಬಿಜೆಪಿ, “ನಿಮ್ಮ ಧನ ಬಲ ಮಾತ್ರ ಬಳಸಿಕೊಳ್ಳುತ್ತಾರೆ, ಅಧಿಕಾರದ ಸಮಯದಲ್ಲಿ ದೂರ ಇಡುತ್ತಾರೆ. ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ. ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲ. ಮತ್ತೊಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು..? ” ಅಂತ ಪ್ರಶ್ನಿಸಿದೆ.
“ನಿಮ್ಮನ್ನು 3ನೇ ದರ್ಜೆ ಪ್ರಜೆಯಂತೆ ನೋಡುತ್ತಾರೇ”
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ, ನಕಲಿ ಗಾಂಧಿ ವಂಶದವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ. ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗಿದ್ದು ಅಸಹಾಯಕತನದ ಪರಮಾವಧಿಯಲ್ಲದೆ ಮತ್ತೇನು? ಅಂತ ಪ್ರಶ್ನಿಸಿದೆ.
“ಇದು ಯಾವುದರ ಮುನ್ಸೂಚನೆ?”
ಕೇಕ್ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್ ದಾಳಿ, ಎಂಬಿ ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ & ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ನಿಮ್ಮನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ..? ಅಂತ ಬಿಜೆಪಿ ವ್ಯಂಗ್ಯವಾಡಿದೆ.
https://twitter.com/BJP4Karnataka/status/1526428612433682432?cxt=HHwWgIDRsYqv-64qAAAA
“ನಿವೃತ್ತಿ ಪಡೆಯುತ್ತೀನಿ ಅಂತ ದಶಕವಾಯ್ತು!”
ಕಾಂಗ್ರೆಸ್ ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ನಿಯಮ ವಿಚಾರಕ್ಕೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಗೂ ಬಿಜೆಪಿ ಗುದ್ದು ಕೊಟ್ಟಿದೆ. ರಾಜಕೀಯ ನಿವೃತ್ತಿಯ ಬಗ್ಗೆ ಸಿದ್ದರಾಮಯ್ಯ ಮಾತನಾಡಲಾರಂಭಿಸಿ ಒಂದು ದಶಕವಾಯ್ತು. ನಿಜ ಹೇಳಬೇಕೆಂದರೆ ವಲಸೆ ಕಾಂಗ್ರೆಸಿಗರು ಇದಕ್ಕಾಗಿ ದಶಮಾನೋತ್ಸವ ಸಂಭ್ರಮ ಮಾಡಬೇಕಿತ್ತು. ಅಲ್ಲಿ ರಾಜಕೀಯ ನಿವೃತ್ತಿ ಘೋಷಣೆಯ ಬೆಳ್ಳಿಹಬ್ಬ ಆಚರಿಸೋಣ ಎಂದು ಆಶಾವಾದ ವ್ಯಕ್ತಪಡಿಸಬೇಕು. ಏಕೆಂದರೆ ನಿಮ್ಮ ಅಧಿಕಾರ ವ್ಯಾಮೋಹ ಅಷ್ಟು ಬಲವಾದದ್ದು” ಅಂತ ಟೀಕಿಸಿದೆ.
“ಪುತ್ರನಿಗೆ ಟಿಕೆಟ್ ಗಟ್ಟಿಮಾಡಿಕೊಳ್ಳಲು ಯತ್ನ”
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ಘೋಷಣೆಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮ್ಮ & ಪುತ್ರನ ಟಿಕೆಟ್ ಗಟ್ಟಿ ಮಾಡಿಕೊಳ್ಳಲು ಹೊರಟಿದ್ದಾರೆ. ತನಗಿಂತ, ಪುತ್ರ ಹೆಚ್ಚು ಮತ ಪಡೆದಿದ್ದಾರೆ, ವರುಣಾದಲ್ಲಿ ನನಗಿಂತ ಹೆಚ್ಚು ಜನಪ್ರಿಯ ಎಂಬ ಹೇಳಿಕೆಯ ಅರ್ಥವೇನು.? ಪುತ್ರನಿಗೂ ಈಗಲೇ ನೀವು ಟಿಕೆಟ್ ಖಚಿತಪಡಿಸುವುದಾದರೆ ಡಿಕೆ ಶಿವಮೊಗ್ಗದಲ್ಲಿ ಇರುವುದೇಕೆ..? ಕಾಂಗ್ರೆಸ್ ಪಕ್ಷದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಂದು ರೀತಿಯಲ್ಲಿ ಕುಟುಂಬವಾದ ಬೆಳೆಸಲು ಹೊರಟಿದ್ದಾರೆ. ಯತೀಂದ್ರ ಜನಪ್ರಿಯ ಶಾಸಕ ಎಂದು ಬಿಂಬಿಸುವ ಮೂಲಕ ತಮ್ಮ ಪುತ್ರನನ್ನು ಮುಖ್ಯಮಂತ್ರಿ ರೇಸ್‌ಗೆ ತರುವ ಲೆಕ್ಕಾಚಾರವೇ..? ಇದು ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸವಾಲೋ..?” ಅಂತ ಬಿಜೆಪಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದೆ.