ವಿಷ್ಣುವರ್ಧನ್- ಭಾರತಿ ಪ್ರೇಮಕ್ಕೆ ಸೇತುವೇ ಆಗಿತ್ತು ಆ ಹೋಟೆಲ್!
‘ನಾಗರಹಾವು’ ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ತೆರೆಮೇಲೆ ಅಬ್ಬರಿಸಿದ ‘ಸಾಹಸ ಸಿಂಹ’ ಡಾ.ವಿಷ್ಣುವರ್ಧನ್ ಅವ್ರಿಗಾಗಿ ಅದೆಷ್ಟೋ ಹುಡುಗಿಯರು ಬೋಲ್ಡ್ ಆಗಿದ್ದು ಉಂಟು. ಆದರೆ, ಎಲ್ಲರನ್ನೂ ಬದಿಗಿಟ್ಟು, ನಟಿ ಭಾರತಿರವರಿಗೆ ಮನಸ್ಸು ಕೊಟ್ಟ ‘ಹೃದಯವಂತ’ ಡಾ.ವಿಷ್ಣುವರ್ಧನ್.
ಇತ್ತ ಹರೆಯದ ಹುಡುಗರ ಕನಸಿನ ರಾಣಿಯಾಗಿದ್ದ ಬೆಳ್ಳಿ ಬೊಂಬೆ ನಟಿ ಭಾರತಿ ಕೂಡ ವಿಷ್ಣುವರ್ಧನ್ ಅವರ ಪ್ರೇಮಕ್ಕೆ ಮನಸೋತಿದ್ದರು. ಹಿರಿಯರ ಸಮ್ಮತಿ ಪಡೆದ ವಿಷ್ಣುವರ್ಧನ್ ಹಾಗೂ ಭಾರತಿ ಫೆಬ್ರವರಿ 27, 1975 ರಂದು ಸಪ್ತಪದಿ ತುಳಿದರು.
ಈಗ ಈ ಜೋಡಿಯ ಬಗ್ಗೆ ಮಾತನಾಡಲು ಕಾರಣ, ಅವರ ಪ್ರೇಮ್ ಕಹಾನಿ. ಮೊಬೈಲ್ ಇಲ್ಲದ ಆ ಕಾಲದಲ್ಲಿ ನಟ ವಿಷ್ಣುವರ್ಧನ್-ಭಾರತಿ ಅವರನ್ನು ಸಂಪರ್ಕಿಸಲು, ಅವರ ಜೊತೆಗೆ ಮಾತನಾಡಲು ಏನೆಲ್ಲಾ ಸಾಹಸ ಮಾಡುತ್ತಿದ್ದರು ಗೊತ್ತಾ?. ಮುಂದೆ

ನಾಗರಹಾವು ಚಿತ್ರಕ್ಕೂ ಮೊದಲೇ ಪ್ರೀತಿ ಶುರು!
ಇತ್ತೀಚೆಗೆ ನಟ ವಿಷ್ಣುವರ್ಧನ್ ಮತ್ತು ನಟಿ ಭಾರತಿಯ ಪ್ರೇಮದ ಬಗ್ಗೆ ಹಿರಿಯ ಪತ್ರಕರ್ತ ಅಶ್ವತ್ ನಾರಾಯಣ್ ಮಾತನಾಡಿದ್ದಾರೆ. ‘ನಾಗರಹಾವು’ ಬಳಿಕ ನಟ ವಿಷ್ಣುವರ್ಧನ್ ದೊಡ್ಡ ಸ್ಟಾರ್ ನಟನಾಗಿ ಬೆಳೆದು ನಿಂತರು. ಆದರೆ ಈ ಚಿತ್ರದ ಆರಂಭಕ್ಕೂ ಮೊದಲೇ, ಭಾರತಿ ಅವರ ಜೊತೆಗೆ ಪ್ರೇಮಕಥೆ ಶುರುವಾಗಿತ್ತು. ವಿಷ್ಣುದಾದಾ ಕದ್ದು-ಮುಚ್ಚಿ ಭಾರತಿಯವರನ್ನು ಸಂಪರ್ಕ ಮಾಡುತ್ತಿದ್ದರಂತೆ. ಇದಕ್ಕಾಗಿ ಸಾಕಷ್ಟು ಸಾಹಸವನ್ನು ಮಾಡಿದ್ದರು ವಿಷ್ಣುವರ್ಧನ್ ಎನ್ನುತ್ತಾರೆ ಹಿರಿಯ ಪತ್ರಕರ್ತ ಅಶ್ವತ್ ನಾರಾಯಣ್

ಮದ್ರಾಸ್‌ನಲ್ಲಿ ಭಾರತಿ- ಬೆಂಗಳೂರಲ್ಲಿ ವಿಷ್ಣು!
ಇನ್ನು ಆಗತಾನೆ ವಿಷ್ಣುವರ್ಧನ್ ‘ವಂಶವೃಕ್ಷ’ ಎನ್ನುವ ಸಿನಿಮಾ ಮಾತ್ರ ಮಾಡಿದ್ದರು. ವಿಷ್ಣುವರ್ಧನ್ ಬೆಂಗಳೂರಿನಲ್ಲಿ ಇರುತ್ತಿದ್ದರು. ಭಾರತಿ ಮದ್ರಾಸ್‌ನಲ್ಲಿ ಇರುತ್ತಿದ್ದರು. ಆದರೆ ವಿಷ್ಣು ದಾದನಿಗೆ ಭಾರತಿ ಅವರನ್ನು ಸಂಪರ್ಕಿಸುವ ಆಸೆ. ಆದರೆ ಫೋನ್ ಮಾಡಲು ಅವರ ಬಳಿ ದುಡ್ಡು ಇರುತ್ತಿರಲಿಲ್ಲವಂತೆ. ಹಾಗಾಗಿ ವಿಷ್ಣುವರ್ಧನ್ ಬೆಂಗಳೂರಿನ ಪ್ಯಾಲೇಸ್ ಹೋಟೆಲ್‌ಗೆ ಬಂದು, ಅಲ್ಲಿಂದ ಭಾರತಿ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರಂತೆ.

ಭಾರತಿ- ವಿಷ್ಣು ಮೊದಲ ಭೇಟಿ!
ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾರತಿ ಅವರು ತಮ್ಮ ಮೊದಲ ಭೇಟಿ ಬಗ್ಗೆ ಹೇಳಿಕೊಂಡಿದ್ದರು. “ಮೊಟ್ಟ ಮೊದಲ ಬಾರಿಗೆ ನಾನು ಡಾ.ವಿಷ್ಣುವರ್ಧನ್ ಅವರನ್ನು ನೋಡಿದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ಅವರೇ ನನ್ನ ಮೀಟ್ ಮಾಡೋಕೆ ಬಂದಿದ್ದರು. ಅವತ್ತು ‘ನಾಗರಹಾವು’ ಹಂಡ್ರೆಡ್ ಡೇಸ್ ಸೆಲೆಬ್ರೇಷನ್ ಇತ್ತು. ಅದು ಅಭಿಮಾನವೋ, ಪ್ರೀತಿಯೋ… ನನಗೆ ಗೊತ್ತಿಲ್ಲ. ನನಗೆ ಆಹ್ವಾನ ನೀಡಲು ಅವರು ಬಂದಿದ್ದರು” ಎಂದಿದ್ದಾರೆ ಭಾರತಿ ವಿಷ್ಣುವರ್ಧನ್.
ನಾನು ತುಂಬಾ ಲಕ್ಕಿ ಎಂದ ನಟಿ ಭಾರತಿ!
ಕಾರ್ಯಕ್ರಮದಲ್ಲಿ ಮಾತಾಡಿದ್ದ ಭಾರತಿ ಅವರು ”ವಿಷ್ಣು ತುಂಬಾ ಕೀಟಲೆ ಮಾಡೋರು. ಎಲ್ಲರನ್ನು ಗೋಳು ಹೋಯ್ದುಕೊಳ್ತಿದ್ರು. ಅವರು ತುಂಬಾ ಜೀನಿಯಸ್. ಅವರಲ್ಲಿ ಮಗುವಿನಂಥ ಮನಸ್ಸಿತ್ತು. ಅಂತಹ ಇನ್ನೊಬ್ಬ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡಿಲ್ಲ. ನಾನು ತುಂಬಾ ಲಕ್ಕಿ. ಎರಡು ದೇಹ ಒಂದು ಮನಸ್ಸು ತರಹ ನಾವಿಬ್ಬರು ಇದ್ವಿ” – ಭಾರತಿ ವಿಷ್ಣುವರ್ಧನ್.